ಹಾವು =ಹಗ್ಗ : ಆಚಾರ್ಯ ಮತ್ತು ಕ್ವಾಂಟಂ ಕುಣಿಕೆ

ಹಾವು =ಹಗ್ಗ : ಆಚಾರ್ಯ ಮತ್ತು ಕ್ವಾಂಟಂ ಕುಣಿಕೆ

About this Book

ವಿಜ್ಞಾನ ಮತ್ತು ತಂತ್ರಜ್ಞಾನಗಳು ಕೊಡುವ ಎಲ್ಲ ಸವಲತ್ತುಗಳನ್ನು ಅನುಭವಿಸುತ್ತ ಅವು ಅಪೂರ್ಣವೆಂದು ಹೀಗಳೆಯುವುದು , ವೇದಾಂತದ ಅದ್ವೈತ ಅಧ್ಯಾತ್ಮ ಪರಿಪೂರ್ಣ ಎಂದು ಗುಟುರು ಹಾಕುವುದು ಮತ್ತು ವಿಜ್ಞಾನ ಹೊಸದಾಗಿ ಏನನ್ನೂ ಹೇಳುತ್ತಿಲ್ಲ . ಅದು ಹೇಳುವುದೆಲ್ಲವೂ ಈಗಾಗಲೇ ಪೌರಾತ್ಯ ಅದರಲ್ಲಿಯೂ ಭಾರತದ ಅನುಭಾವದಲ್ಲಿದೆ ಎನ್ನುವುದು ವಿಜ್ಞಾನ ನೀಡಿದ ಫಲಿತಾಂಶಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಆತುರದಲ್ಲಿ ಹಾಕಿಕೊಂಡಿರುವ ,ಪರಿಶೀಲಿಸಲಾಗದ ಊಹೆಯನ್ನೇ ಉಸಿರಾಗಿಸಿಕೊಂಡು ಕಟ್ಟಿದ ಹುಸಿ ವಿಜ್ಞಾನದ ಹೊಸ ವಾದಗಳು. ಧಾರ್ಮಿಕ ಮತ್ತು ತಾತ್ತ್ವಿಕ ಶ್ರೇಷ್ಟತೆಯ ವ್ಯಸನಗಳೇ  ಇದಕ್ಕೆ ಅಡಿಪಾಯ.  

ವಿಜ್ಞಾನ ಮತ್ತು ಅನುಭಾವಿಕ ಭಾವನಾವಾದಿ ವೇದಾಂತಿಗಳ ಅದ್ವೈತ , ಬೌದ್ಧರ ಶೂನ್ಯವಾದ , ವಿಜ್ಞಾನವಾದ , ಚೀನಿಯರ ತಾವೊ ಇವುಗಳ ನಡುವೆ ಏನಾದರೂ ಹೋಲಿಕೆಗಳಿವೆಯೇ , ಆಧ್ಯಾತ್ಮಿಕ ಅನುಭಾವವಾದಿಗಳು ಹೇಳುವಂತೆ ವಿಜ್ಞಾನದ ಅಪೂರ್ಣತೆಯನ್ನು ಪೌರಾತ್ಯ ಅಧ್ಯಾತ್ಮ ತುಂಬಬಲ್ಲದೇ ಎನ್ನುವ ಚರ್ಚೆ ಈ ಪುಸ್ತಕದಲ್ಲಿದೆ. ಹಾವು-ಹಗ್ಗ , ಈ ವಿಶ್ವ ಭ್ರಮೆಯೇ ಹೊರತು ನಿಜವಲ್ಲ  ಎನ್ನುವ ಅದ್ವೈತದ ಮಾಯಾ  ತತ್ತ್ವವನ್ನು , ಆಚಾರ್ಯ ಅದರ ಪ್ರತಿಪಾದಕರನ್ನು , ಕ್ವಾಂಟಂ ಕುಣಿಕೆ ವಿಜ್ಞಾನ ಮತ್ತು ಅನುಭಾವಗಳ ನಡುವಿನ ಕಂದಕವನ್ನು ಮತ್ತು  ವಿಜ್ಞಾನ ಈಗ ಏನನ್ನು ಹೇಳುತ್ತಿದೆ , ಮುಂದೆ ಯಾವ ದಿಕ್ಕಿನಲ್ಲಿ ಸಾಗಿ ಅನುಭಾವಿಕ ಆಧ್ಯಾತ್ಮದ ಊಹೆಗಳಿಗೆ , ಹೋಲಿಕೆಗಳಿಗೆ ಹೇಗೆ ನೇಣು ಕುಣಿಕೆ ಆಗಬಹುದೆನ್ನುವುದನ್ನು ಸೂಚಿಸುತ್ತದೆ.

Similar Books:

eBookmela
Logo